ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್ (ಸಿಬಿಪಿಎಸ್) ಸಹ-ಸಂಸ್ಥಾಪಕರಾದ ಡಾ. ಪೂರ್ಣಿಮಾ ವ್ಯಾಸಲು ಅವರ ಗೌರವಾರ್ಥವಾಗಿ ಆಯೋಜಿಸಿರುವ ‘ಪೂರ್ಣಿಮಾ ವ್ಯಾಸುಲು ಸ್ಮಾರಕ ಉಪನ್ಯಾಸ’ ಕ್ಕೆ ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇವೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಹಾಗೂ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್ ನ ಮುಖ್ಯಸ್ಥರಾದ ಡಾ. ಅಮಿತ್ ಬಸೋಲೆ ಅವರು ‘ರಾಷ್ಟ್ರೀಯ ಉದ್ಯೋಗ ನೀತಿಯ ರೂಪ ರಚನಾಂಶಗಳು’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡುತ್ತಾರೆ.
ಈ ಉಪನ್ಯಾಸವನ್ನು ಮಂಗಳವಾರ, 28ನೇ ಮೇ 2024 ರಂದು, ಸಂಜೆ 6 ರಿಂದ 8ರ ವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ನೋಂದಣಿ, ಚಹಾ ಮತ್ತು ತಿಂಡಿಯೊಂದಿಗೆ ಸಂಜೆ 5:30ಗೆ ಪ್ರಾರಂಭವಾಗುತ್ತದೆ.
ಭಾಷಣಾಕಾರರ ಬಗ್ಗೆ:
ಅಮಿತ್ ಬಸೋಲೆ ಅವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಹಾಗೂ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯ್ಮೆಂಟ್ ನ ಮುಖ್ಯಸ್ಥರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಅವರು ಅಮ್ಹೆರ್ಸ್ಟ್‌ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ, ಹಾಗೂ ಡ್ಯೂಕ್ ವಿಶ್ವವಿದ್ಯಾನಿಲಯದಿಂದ ನರವಿಜ್ಞಾನದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದಾರೆ. ಅರ್ಥಶಾಸ್ತ್ರದಲ್ಲಿ ಅವರ ತಜ್ಞತೆ ಮುಖ್ಯವಾಗಿ ಬಡತನ ಮತ್ತು ಅಸಮಾನತೆ, ಉದ್ಯೋಗ, ರಚನಾತ್ಮಕ ಬದಲಾವಣೆ, ಜ್ಞಾನದ ರಾಜಕೀಯ ಆರ್ಥಿಕತೆಯ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿದೆ. ಅವರು ಮುಖ್ಯವಾಗಿ ಭಾರತೀಯ ಆರ್ಥಿಕತಿಯ ಬಗ್ಗೆ ಕಾರ್ಯ ನಿರ್ವಹಿಸಿದ್ದಾರೆ.
ಡಾ. ಪೂರ್ಣಿಮಾ ವ್ಯಾಸುಲುರವರ ಬಗ್ಗೆ:
ಡಾ.ಪೂರ್ಣಿಮಾ ವ್ಯಾಸುಲುರವರು ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅರ್ಥಶಾಸ್ತ್ರದಲ್ಲಿ ತಮ್ಮ ಪಿಎಚ್‌ಡಿಯನ್ನು ಪೂರ್ಣಗೊಳಿಸಿದರು. ಇವರು ಸಿಬಿಪಿಎಸ್ ನ ಸಹ-ಸಂಸ್ಥಾಪಕರಾಗಿ, ಸಂಸ್ಥೆಯ ಬೌದ್ಧಿಕ ಬೆಳವಣಿಗೆಗೆ ಮಾತ್ರ ಕೊಡುಗೆ ನೀಡದೆ, ಸಂಸ್ಥೆಯಲ್ಲಿ ಕಾಳಜಿ ಮತ್ತು ಸೌಹಾರ್ದತೆಯ ಮನೋಭಾವವನ್ನು ಪೋಷಿಸಿದರು. ಸಂಗೀತದಿಂದ ನಟನೆಯ ವರೆಗೂ ಹಿಡಿದು ಬಹುಮುಖ ಪ್ರತಿಭಾವಂತರಾಗಿ ಹೆಸರುವಾಸಿಯಾಗಿದ್ದ ಡಾ. ಪೂರ್ಣಿಮಾ ಅವರು, ಕಲಾ ಕೌಶಲವನ್ನು ತಮ್ಮ ಕೆಲಸ-ಕಾರ್ಯಕ್ಕೂ ಸುಗಮವಾಗಿ ಬೆರೆಸಿದರು.
ಈ ಸ್ಮಾರಕ ಉಪನ್ಯಾಸವು ಡಾ. ಪೂರ್ಣಿಮಾ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಸಿಬಿಪಿಎಸ್ ನ ಮೇಲೆ ಅವರು ಬೀರಿರುವ ಅಪಾರ ಪ್ರಭಾವಕ್ಕೆ ಗೌರವ ಸೂಚಿಸುವ ವಿಧಾನವಾಗಿದೆ. ಮೇ 28, ಮಂಗಳವಾರ, ಸಂಜೆ 6 ರಿಂದ 8 ರವರೆಗೆ ನಡೆಯುವ ಉಪನ್ಯಾಸ ಹಾಗೂ ನಂತರದ ಚರ್ಚೆ-ಸಂವಾದದಲ್ಲಿ ಭಾಗವಹಿಸಲು ಈ ಮೂಲಕ ತಮ್ಮೆಲ್ಲರನ್ನು ಆಹ್ವಾನಿಸುತ್ತೇವೆ.
ಎಲ್ಲರಿಗೂ ಸ್ವಾಗತ. ಪ್ರವೇಶ ಉಚಿತ.