At the Neeti Habba 2024, CBPS will be hosting a range of exciting and immersive workshops and activities of various themes in three languages. All the workshops have been designed to engage a diverse range of audiences – students, government officials, non-profit professionals, researchers and academicians. Read more about the workshops and register today. Registrations for individual workshops will be accepted on a first-come, first-served basis, with limited spots available for each session.
Click here to register for workshops. For the schedule, click here.
Workshop 1: The Quiltmaker
Language: English, Kannada, Hindi
Duration: 2 hours
About the game:
A game of strategy, financial planning, and resilience. Play as skilled quiltmakers tasked with creating the most complete patchwork quilt, one patch at a time. Played over multiple rounds, this game provides insights into the different kinds of strategic decisions required to withstand and improve social and economic resilience.
ಹೆಸರು: ರಂಗಿನ ರಜಾಯಿ
ಭಾಷೆ: ಇಂಗ್ಲಿಷ್, ಕನ್ನಡ, ಹಿಂದಿ
ಅವಧಿ: 2 ಗಂಟೆ
ಆಟದ ಬಗ್ಗೆ:
ಕಾರ್ಯತಂತ್ರ, ಹಣಕಾಸು ಯೋಜನೆ ಮತ್ತು ಸ್ಥಿತಿಸ್ಥಾಪಕತ್ವದ ಆಟ. ಒಂದರ ನಂತರ ಒಂದು ಚೌಕದ ಬಟ್ಟೆಗಳನ್ನು ಜೋಡಿಸುತ್ತಲೇ, ಅತ್ಯಂತ ಸಂಪೂರ್ಣ ರಜಾಯಿಯನ್ನು ರಚಿಸುವ ನಿಪುಣ ರಜಾಯಿ ತಯಾರಕರಾಗಿ ಆಟವಾಡಿರಿ. ಅನೇಕ ಸುತ್ತುಗಳನ್ನು ಹೊಂದಿರುವ ಈ ಆಟವು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೊಂದಲು ಮತ್ತು ಸುಧಾರಿಸಲು ಅಗತ್ಯವಿರುವ ವಿವಿಧ ರೀತಿಯ ಕಾರ್ಯತಂತ್ರದ ನಿರ್ಧಾರಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ.
Workshop 2: Come, let us build an Anganwadi
Language: English, Kannada, Hindi
Duration: 1 hour 30 minutes
About the workshop:
In this interactive workshop, participants (in a group activity) design their ideal Anganwadi (Early Childhood Development Centre) in various contexts and through various challenges. Teams will make decisions on facilities like infrastructure, health, education, nutrition, and community engagement to design a truly responsive and comprehensive Anganwadi Centre.
ಹೆಸರು: ಬನ್ನಿ, ನಾವು ಅಂಗನವಾಡಿಯನ್ನು ನಿರ್ಮಿಸೋಣ
ಭಾಷೆ: ಇಂಗ್ಲಿಷ್, ಕನ್ನಡ, ಹಿಂದಿ
ಅವಧಿ: 1 ಗಂಟೆ 30 ನಿಮಿಷ
ಕಾರ್ಯಾಗಾರದ ಬಗ್ಗೆ:
ಇದೊಂದು ಸಂವಾದಾತ್ಮಕ ಕಾರ್ಯಾಗಾರದವಾಗಿದ್ದು, ಇದರಲ್ಲಿ ಭಾಗವಹಿಸುವವರು (ಗುಂಪು ಚಟುವಟಿಕೆಯಲ್ಲಿ) ತಮ್ಮ ಆದರ್ಶ ಅಂಗನವಾಡಿಯನ್ನು (ಆರಂಭಿಕ ಬಾಲ್ಯದ ಅಭಿವೃದ್ಧಿ ಕೇಂದ್ರ) ವಿವಿಧ ಸಂದರ್ಭಗಳಲ್ಲಿ ಮತ್ತು ವಿವಿಧ ಸವಾಲುಗಳ ನಡುವೆ ಚಿತ್ರಣವನ್ನು ಕಟ್ಟಿಕೊಡಬೇಕು. ನಿಜವಾಗಿಯೂ ಸ್ಪಂದಿಸುವ ಮತ್ತು ಸಮಗ್ರ ಅಂಗನವಾಡಿ ಕೇಂದ್ರವನ್ನು ವಿನ್ಯಾಸಗೊಳಿಸಲು ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಪೌಷ್ಟಿಕಾಂಶ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯಂತಹ ಸೌಲಭ್ಯಗಳ ಬಗ್ಗೆ ಇಲ್ಲಿ ತಂಡಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
Workshop 3: Understanding Complex Adaptive Systems in Gender Violence in Public Spaces
Language: English, Kannada, Hindi
Duration: 1 hour
About the workshop:
A complex adaptive system (CAS) is a dynamic network of interactions comprising multiple, interconnected components that constantly adapt in response to new developments. What emerges from these interactions is not always predictable. A car, a flock of birds, the human brain: all are complex adaptive systems. But is there a way in which we imagine people and communities as complex adaptive systems? Sign up to find out!
We invite you to play a series of engaging games with us to understand how individual components of CAS work together to produce unpredictable system-level phenomena. In our project related to gender violence in public spaces (GVPS), we used the framework of CAS to understand the creation of safe spaces within public spaces, for women and adolescent girls. Please note: The way in which we used CAS to develop process indicators for gender violence in public spaces will be featured in our companion workshop – Using process Indicators.
ಹೆಸರು: ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ವ-ಆಧಾರಿತ ಹಿಂಸೆಗಳಲ್ಲಿನ ಸಂಕೀರ್ಣ ಹೊಂದಾಣಿಕೆಯ ವ್ಯವಸ್ಥೆಗಳ ಅರ್ಥೈಸಿಕೊಳ್ಳುವಿಕೆ
ಭಾಷೆ: ಇಂಗ್ಲಿಷ್, ಕನ್ನಡ, ಹಿಂದಿ
ಅವಧಿ: 1 ಗಂಟೆ
ಕಾರ್ಯಾಗಾರದ ಬಗ್ಗೆ:
ಸಂಕೀರ್ಣ ಹೊಂದಾಣಿಕೆ ವ್ಯವಸ್ಥೆ (ಸಿ ಎ ಎಸ್) ಎಂಬುದು ಪರಸ್ಪರ ಕ್ರಿಯೆಗಳ ಕ್ರಿಯಾತ್ಮಕ ಜಾಲವಾಗಿದೆ. ಇದು ಹೊಸ ಬೆಳವಣಿಗೆಗಳಿಗೆ ಪ್ರತಿಕ್ರಿಯಾತ್ಮಕವಾಗಿ, ಸತತ ಹೊಂದಿಕೊಳ್ಳುವ ಬಹು, ಪರಸ್ಪರ ಸಂಪರ್ಕಿತ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪರಸ್ಪರ ಕ್ರಿಯೆಗಳಿಂದ ಹೊರಹೊಮ್ಮುವ ಸಂಗತಿಗಳನ್ನು ಸದಾ ಊಹಿಸಲು ಸಾಧ್ಯವಿಲ್ಲ. ಒಂದು ಕಾರು, ಪಕ್ಷಿಗಳ ಒಂದು ಹಿಂಡು, ಮಾನವರ ಮೆದುಳು: ಎಲ್ಲವೂ ಸಂಕೀರ್ಣ ಹೊಂದಾಣಿಕೆಯ ವ್ಯವಸ್ಥೆಗಳು. ಆದರೆ, ಜನರು ಮತ್ತು ಸಮುದಾಯಗಳನ್ನು ಸಂಕೀರ್ಣ ಹೊಂದಾಣಿಕೆಯ ವ್ಯವಸ್ಥೆಗಳಾಗಿ ನಾವು ಕಲ್ಪಿಸಿಕೊಳ್ಳುವ ಮಾರ್ಗವಿದೆಯೇ? ಇದನ್ನು ತಿಳಿಯಲು ಈ ಕಾರ್ಯಾಗಾರಕ್ಕೆ ನೋಂದಾಯಿಸಿ!
ಸಿ.ಎ.ಎಸ್ ನ ವೈಯಕ್ತಿಕ ಅಂಶಗಳು ಒಟ್ಟಾಗಿ ಸೇರಿ ವ್ಯವಸ್ಥಾ-ಮಟ್ಟದ ಅನಿರೀಕ್ಷಿತ ವಿದ್ಯಮಾನಗಳನ್ನು ಉತ್ಪತ್ತಿಸಲು ಹೇಗೆ ಕೆಲಸ ಮಾಡುತ್ತವೆ ಎಂದು ಅರ್ಥೈಸಿಕೊಳ್ಳಲುನಮ್ಮೊಂದಿಗೆ ಆಕರ್ಷಕ ಆಟಗಳ ಸರಣಿಯನ್ನು ಆಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ವ-ಆಧಾರಿತ ಹಿಂಸಾಚಾರಕ್ಕೆ (ಜಿವಿಪಿಎಸ್) ಸಂಬಂಧಿಸಿದ ನಮ್ಮ ಯೋಜನೆಯಲ್ಲಿ ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರಿಗೆಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಸ್ಥಳಗಳ ನಿರ್ಮಾಣದ ಬಗ್ಗೆ ಅರ್ಥೈಸಿಕೊಳ್ಳಲು ನಾವು ಸಿ.ಎ.ಎಸ್ ನ ಚೌಕಟ್ಟನ್ನು ಬಳಸಿದ್ದೇವೆ.
ದಯವಿಟ್ಟು ಗಮನಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ವ ಆಧಾರಿತ ಹಿಂಸೆಗಳಿಗಾಗಿ ಪ್ರಕ್ರಿಯೆ ಸೂಚಕಗಳನ್ನು ಅಭಿವೃದ್ಧಿಪಡಿಸಲು ನಾವು ಸಿಎಎಸ್ ಅನ್ನು ಬಳಸಿದ ವಿಧಾನವನ್ನು ನಮ್ಮ ಸಹವರ್ತಿ ಕಾರ್ಯಾಗಾರದವಾದ ‘ಪ್ರಕ್ರಿಯೆ ಸೂಚಕಗಳನ್ನು ಬಳಸುವುದರಲ್ಲಿ ಪ್ರದರ್ಶಿಸಲಾಗುವುದು.
Workshop 4: Using Process Indicators in Gender Violence in Public Spaces
Language: English, Kannada, Hindi
Duration: 1.5 hours
About the workshop:
Social change is complex, and driven by many interconnected processes. While outcome Indicators are very useful in understanding the way in which social change is taking place, they often fail to reveal the complexity of the process through which social change occurs. For the past four years, our work on the Gender Violence in Public Spaces (GVPS) project has led to the development of a framework that has the potential to track social change through process indicators.
In this workshop, we’ll engage in a hands-on activity that explores the different process indicators that can measure social change, and the manner in which it can be used. Join us in our journey in trying to understand and unpack the complexity of social change!
Please note: It is recommended that you attend our CAS workshop prior to this workshop to get insights into how we developed these process indicators.
ಹೆಸರು: ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ವ-ಆಧಾರಿತ ಹಿಂಸೆಗಳಲ್ಲಿ ಪ್ರಕ್ರಿಯಾತ್ಮಕ ಸೂಚಕಗಳ ಬಳಕೆ
ಭಾಷೆ: ಇಂಗ್ಲಿಷ್, ಕನ್ನಡ, ಹಿಂದಿ
ಅವಧಿ: 1.5 ಗಂಟೆ
ಕಾರ್ಯಾಗಾರದ ಬಗ್ಗೆ:
ಸಾಮಾಜಿಕ ಬದಲಾವಣೆಯು ಸಂಕೀರ್ಣವಾಗಿರುವುದಲ್ಲದೆ, ಅನೇಕ ಅಂತರ್ಸಂಪರ್ಕಿತ ಪ್ರಕ್ರಿಯೆಗಳಿಂದ ನಡೆಸಲ್ಪಡುತ್ತದೆ. ಆಗುತ್ತಿರುವ ಸಾಮಾಜಿಕ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಫಲಿತಾಂಶ ಸೂಚಕಗಳು ಬಹಳ ಉಪಯುಕ್ತವಾಗಿದ್ದರೂ, ಸಾಮಾಜಿಕ ಬದಲಾವಣೆ ಸಂಭವಿಸುವ ಪ್ರಕ್ರಿಯೆಯ ಸಂಕೀರ್ಣತೆಯನ್ನು ಬಹಿರಂಗಪಡಿಸಲು ಅವು ಹೆಚ್ಚಾಗಿ ವಿಫಲವಾಗುತ್ತವೆ. ಕಳೆದ ನಾಲ್ಕು ವರ್ಷಗಳಿಂದ, ಸಾರ್ವಜನಿಕ ಸ್ಥಳಗಳಲ್ಲಿ ಲಿಂಗತ್ವ ಆಧಾರಿತ ಹಿಂಸೆ (ಜಿವಿಪಿಎಸ್) ಯೋಜನೆಯ ಮೇಲಿನ ನಮ್ಮ ಕಾರ್ಯಾಚರಣೆಯು ಪ್ರಕ್ರಿಯೆ ಸೂಚಕಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವ ನಿಗದಿತ ಚೌಕಟ್ಟಿನ ನಿರ್ಮಾಣಕ್ಕೆ ಕಾರಣವಾಗಿದೆ.
ಈ ಕಾರ್ಯಾಗಾರದಲ್ಲಿ ನಾವು ಸಾಮಾಜಿಕ ಬದಲಾವಣೆಯನ್ನು ಅಳೆಯುವ ವಿವಿಧ ಪ್ರಕ್ರಿಯೆ ಸೂಚಕಗಗಳು ಮತ್ತು ಅವುಗಳನ್ನು ಬಳಸಬಹುದಾದ ವಿಧಾನವನ್ನು ಅನ್ವೇಷಿಸುವ ಪ್ರಾಯೋಗಿಕ ಚಟುವಟಿಕೆ ಒಂದರಲ್ಲಿ ನಾವು ತೊಡಗಿಕೊಳ್ಳುತ್ತೇವೆ. ಸಾಮಾಜಿಕ ಬದಲಾವಣೆಯ ಸಂಕೀರ್ಣತೆಯನ್ನು ಅರ್ಥೈಸಿಕೊಳ್ಳಲು ಮತ್ತು ಹೊರತರುವ ಪ್ರಯತ್ನವಾಗಿರುವ ನಮ್ಮ ಪ್ರಯಾಣದಲ್ಲಿ ನೀವೂ ಸೇರಿಕೊಳ್ಳಿ!
ದಯವಿಟ್ಟು ಗಮನಿಸಿ: ಈ ಪ್ರಕ್ರಿಯಾತ್ಮಕ ಸೂಚಕಗಳನ್ನು ನಾವು ಹೇಗೆ ನಿರ್ಮಿಸಿದ್ದೇವೆ ಎಂಬುದರ ಕುರಿತು ಒಳನೋಟಗಳನ್ನು ಅರಿಯಲು ಈ ಕಾರ್ಯಾಗಾರಕ್ಕೆ ಮುಂಚಿತವಾಗಿ ನಮ್ಮ ಸಿಎಎಸ್ ಕಾರ್ಯಾಗಾರಕ್ಕೆ ಹಾಜರಾಗಲು ಶಿಫಾರಸ್ಸು ಮಾಡಲಾಗಿದೆ.
Activity | Conversation Corner: Interactive Roundtable
Language: Hindi and Telugu
Duration: 90 minutes a day, 10 minute slots
About the activity:
What are the everyday experiences of gender-based violence from the perspective of a helpline counsellor? What are the considerations of Justice and Fairness that a Nyaya (Justice) committee member has to make? How do community members strategise around social change within their own community? What is the journey of a community mobiliser?
We present Conversation Corners, where you can have personal conversations about these questions and more, with women who have had to ask and answer similar questions for themselves. These women are from our partner organisations – Doosra Dashak, Rajasthan; Bhumika Women’s Collective, Telangana; and Society for Women’s Action and Training Initiative (SWATI), Gujarat. You are invited to sit with each of the organisations to form a deeper engagement with community members, through sharing of stories, experiences, and questions. Conversation corners are designed so that we can take ten minutes to talk, listen, and learn…maybe, share a laugh or two!
ಸಂವಾದದ ಕೋಣೆ: ದುಂಡು ಮೇಜಿನ ಸಂವಾದ
ಭಾಷೆ: ಹಿಂದಿ ಮತ್ತು ತೆಲುಗು
ಅವಧಿ: ದಿನದಲ್ಲಿ 90 ನಿಮಿಷಗಳು,10 ನಿಮಿಷಗಳ ಕಾಲಾವಧಿ (ಸ್ಲಾಟ್ಸ್)
ಕಾರ್ಯಚಟುವಟಿಕೆ ಬಗ್ಗೆ:
ಸಹಾಯವಾಣಿ ಸಲಹೆಗಾರರ ದೃಷ್ಟಿಕೋನದಿಂದ ಗಮನಿಸುವುದಾದರೆ, ಲಿಂಗತ್ವ ಆಧಾರಿತ ಹಿಂಸೆಯ ದೈನಂದಿನ ಅನುಭವಗಳೇನು? ನ್ಯಾಯ (ಜಸ್ಟಿಸ್) ಸಮಿತಿಯ ಸದಸ್ಯರು ಮಾಡಬೇಕಾದ ನ್ಯಾಯ ಮತ್ತು ಪ್ರಾಮಾಣಿಕತೆಯ ಪರಿಗಣನೆಗಳು ಯಾವುವು? ಸಮುದಾಯದ ಸದಸ್ಯರು ತಮ್ಮದೇ ಸಮುದಾಯದೊಳಗೆ ಸಾಮಾಜಿಕ ಬದಲಾವಣೆಯ ಸುತ್ತ ಹೇಗೆ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ? ಸಮುದಾಯವನ್ನು ಸಂಚಲನಕಾರರ ಪಯಣವೇನು?
ನಾವು ಸಂವಾದದ ಕೋಣೆಗಳನ್ನು ಪ್ರಸ್ತುತಪಡಿಸುತ್ತೇವೆ; ಇಲ್ಲಿ ನೀವು ಇದೇ ರೀತಿಯ ಪ್ರಶ್ನೆಗಳನ್ನು ಸ್ವತಃ ಕೇಳಬೇಕಾದ ಮತ್ತು ಉತ್ತರಿಸಬೇಕಾದ ಮಹಿಳೆಯರೊಂದಿಗೆ ಈ ಪ್ರಶ್ನೆಗಳ ಜೊತೆಗೆ ಇನ್ನೂ ಹೆಚ್ಚಿನ ಅಂಶಗಳ ಬಗ್ಗೆ ವೈಯಕ್ತಿಕ ಸಂಭಾಷಣೆಗಳನ್ನು ನಡೆಸಬಹುದು. ಈ ಮಹಿಳೆಯರು ನಮ್ಮ ಪಾಲುದಾರ ಸಂಸ್ಥೆಗಳಾದ ದೂಸ್ರಾ ದಶಕ್ (ರಾಜಸ್ಥಾನ); ಭೂಮಿಕಾ ವಿಮೆನ್ಸ್ ಕಲೆಕ್ಟಿವ್ (ತೆಲಂಗಾಣ); ಮತ್ತು ಸೊಸೈಟಿ ಫಾರ್ ವುಮೆನ್ಸ್ ಆಕ್ಷನ್ ಅಂಡ್ ಟ್ರೈನಿಂಗ್ ಇನಿಶಿಯೇಟಿವ್ (ಸ್ವಾತಿ, ಗುಜರಾತ್) ನಿಂದ ಬಂದಿರುವರು. ಕಥೆಗಳು, ಅನುಭವಗಳು ಮತ್ತು ಪ್ರಶ್ನೆಗಳನ್ನು ಹಂಚಿಕೊಳ್ಳುವುದರ ಮೂಲಕ ಸಮುದಾಯದ ಸದಸ್ಯರೊಂದಿಗೆ ಮತ್ತಷ್ಟು ಆಳವಾಗಿ ತೊಡಗಿಸಿಕೊಳ್ಳಲು ಪ್ರತಿಯೊಂದು ಸಂಸ್ಥೆಗಳೊಂದಿಗೆ ಕುರಿತು ಮಾತನಾಡಲು ನಿಮ್ಮನ್ನು ಆಹ್ವಾನಿಸಲಾಗಿದೆ.
ಹತ್ತು ನಿಮಿಷ ತೆಗೆದುಕೊಂಡು ನಾವು ಮಾತನಾಡಿ, ಕೇಳಿ, ಕಲಿತು.. ಬಹುಶಃ, ಒಂದೆರಡು ನಗೆಗಳನ್ನು ಹಂಚಿಕೊಳ್ಳುವಂತೆ ಅವಕಾಶ ಒದಗಿಸಲು ಈ ಸಂವಾದದ ಕೋಣೆಗಳನ್ನು ವಿನ್ಯಾಸಿಸಲಾಗಿವೆ.
All-day activities across both the days [walk-in registrations]
Board game | Roll the Dice: The Gender Budget Adventure
Language: English, Kannada, Hindi
Duration: 10-15 minutes
About the game:
Gender responsive budgeting (GRB) refers to the practice of integrating a gendered perspective into public financial management and formulation, with the intention of promoting gender equality. Across the world, different countries practise gender responsive budgeting in a variety of different ways. To discover the effectiveness of some of these practices, let’s play a classic game of Snakes & Ladders, but with a twist.
Quiz | What’s Your Gender Budget Personality?
Language: English, Hindi, Kannada
Duration: 10-15 minutes
About the game:
Across the world, different countries practise gender responsive budgeting (GRB) in a variety of different ways, with different methodologies and philosophies – or rather, unique ‘personalities’. In our short quiz, find out how your answers align with the GRB practices of various countries around the world! No previous knowledge of public finance necessary to participate in this game.
Interactive Display | Around the World with a Red Briefcase
Language: English, Hindi, Kannada
Duration: 10-15 minutes
About the game:
This Atlas display explores a variety of interesting facts about gender responsive budgeting (GRB) practices internationally. The display allows participants to interact with the maps and learn about different processes and tools used by governments across the world in formulating GRBs.
ಬೋರ್ಡ್ ಗೇಮ್ | ಪಗಡೆ ಆಟ: ಜೆಂಡರ್ ಬಜೆಟ್ ಸಾಹಸ
ಭಾಷೆ: ಇಂಗ್ಲಿಷ್, ಕನ್ನಡ, ಹಿಂದಿ
ಅವಧಿ: 10-15 ನಿಮಿಷ
ಆಟದ ಬಗ್ಗೆ:
ಲಿಂಗತ್ವ ಸಂವೇದಿ ಬಜೆಟ್ (ಜಿಆರ್ಬಿ) ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಸೂತ್ರೀಕರಣದಲ್ಲಿ ಲಿಂಗತ್ವದ ದೃಷ್ಟಿಕೋನವನ್ನು ಸಂಯೋಜಿಸುವ ಅಭ್ಯಾಸವನ್ನು ಸೂಚಿಸುತ್ತದೆ. ಪ್ರಪಂಚದಾದ್ಯಂತ, ವಿವಿಧ ದೇಶಗಳು ಲಿಂಗತ್ವ ಸಂವೇದಿ ಬಜೆಟ್ ಅನ್ನು ವಿವಿಧ ರೀತಿಯಲ್ಲಿ ಅಭ್ಯಸಿಸುತ್ತಾರೆ. ಈ ಕೆಲವು ಅಭ್ಯಾಸಗಳ ಪರಿಣಾಮಕಾರಿತ್ವವನ್ನು ಕಂಡುಹಿಡಿಯಲು, ಹಾವು-ಏಣಿ ಆಟವನ್ನು ಇಲ್ಲಿ ಸಣ್ಣದೊಂದು ತಿರುವಿನೊಂದಿಗೆ ಆಡೋಣ.
ರಸಪ್ರಶ್ನೆ | ನಿಮ್ಮ ಜೆಂಡರ್ ಬಜೆಟ್ ವ್ಯಕ್ತಿತ್ವ ಏನು?
ಭಾಷೆ: ಇಂಗ್ಲಿಷ್, ಹಿಂದಿ, ಕನ್ನಡ
ಅವಧಿ: 10-15 ನಿಮಿಷ
ಆಟದ ಬಗ್ಗೆ:
ವಿಶ್ವಾದ್ಯಂತ ವಿವಿಧ ದೇಶಗಳು ವಿಭಿನ್ನ ವಿಧಾನಗಳಲ್ಲಿ, ಅವರದ್ದೇ ಆದ ವಿಧಾನಗಳು ಮತ್ತು ತತ್ವಗಳೊಂದಿಗೆ ಇಲ್ಲವೇ ವಿಶಿಷ್ಟ ‘ವ್ಯಕ್ತಿತ್ವಗಳೊಂದಿಗೆ’ ಲಿಂಗತ್ವ ಸಂವೇದಿ ಬಜೆಟ್ (ಜಿಆರ್ಬಿ) ಅನ್ನು ಅಭ್ಯಾಸ ಮಾಡುತ್ತಾರೆ. ನಮ್ಮ ಈ ಕಿರು ರಸಪ್ರಶ್ನೆಯಲ್ಲಿ ನಿಮ್ಮ ಉತ್ತರಗಳು ವಿಶ್ವಾದ್ಯಂತ ವಿವಿಧ ದೇಶಗಳ ಜಿಆರ್ಬಿ ಅಭ್ಯಾಸಗಳೊಂದಿಗೆ ಹೇಗೆ ಹೊಂದಿಕೆಯಾಗುತ್ತವೆ ಎಂಬುದನ್ನು ಕಂಡುಕೊಳ್ಳಿ! ಈ ಆಟದಲ್ಲಿ ಭಾಗವಹಿಸಲು ಸಾರ್ವಜನಿಕ ಹಣಕಾಸಿನ ಬಗ್ಗೆ ತಿಳಿದುಕೊಂಡಿರುವ ಅಗತ್ಯವಿಲ್ಲ.
ಆಂತರಿಕ ಪ್ರದರ್ಶನ | ಕೆಂಪು ಕೈಪೆಟ್ಟಿಗೆಯ ಜೊತೆ ವಿಶ್ವ ಪ್ರವಾಸ
ಭಾಷೆ: ಇಂಗ್ಲಿಷ್, ಹಿಂದಿ, ಕನ್ನಡ
ಅವಧಿ: 10-15 ನಿಮಿಷ
ಆಟದ ಬಗ್ಗೆ:
ಈ ಅಟ್ಲಾಸ್ ಪ್ರದರ್ಶನವು ಲಿಂಗತ್ವ ಸಂವೇದಿ ಬಜೆಟ್ಇನ (ಜಿಆರ್ಬಿ) ವಿವಿಧ ಅಭ್ಯಾಸಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನ್ವೇಷಿಸುತ್ತದೆ. ಈ ಪ್ರದರ್ಶನವು ಭಾಗವಹಿಸುವವರಿಗೆ ನಕ್ಷೆಗಳನ್ನು ಅನ್ವೇಷಿಸಿ ಜಿಆರ್ಬಿ ಗಳನ್ನು ರೂಪಿಸುವಲ್ಲಿ/ಸೂತ್ರಿಕರಿಸುವುದರಲ್ಲಿ ವಿಶ್ವಾದ್ಯಂತ ಸರಕಾರಗಳು ಉಪಯೋಗಿಸುವ ವಿಭಿನ್ನ ಪ್ರಕ್ರಿಯೆಗಳು ಮತ್ತು ಉಪಕರಣಗಳ ಬಗ್ಗೆ ಕಲಿಯಲು ಅವಕಾಶ ನೀಡುತ್ತದೆ.
Click here to register for workshops. For the schedule, click here.